ನಾ ಕಂಡ ಆ ಕುದುರೆಮುಖ
ಇದು ನಾ ಕಂಡ ಕುದುರೆಮುಖ ಅನುಭವ ಹಂಚಿಕೊಳ್ಳುವ ಸಮಯ.
ಕುದುರೆಮುಖ ನೋಡೋ ಆಸೆ ನನಗೆ ಬಹಳ ವರ್ಷದಿಂದ ಇತ್ತು. ನಾ ಕೆಲಸ ಮಾಡೋ ತಂಡದ ಹಿರಿಯ ಸಹಪಾಠಿ ಕೇಳಿದ್ರು "ಕುದುರೆಮುಖ ಹೋಗೋಣ ಬರ್ತಿಯ?", ಅದಕ್ಕೆ ನನ್ನ ಉತ್ತರ "ಸರಿ ಬರ್ತಿನಿ". ಅವರಿಗೆ ಕುದುರೆಮುಖ ತೋರಿಸೋ ಒಂದು ಗುಂಪಿನ ಪರಿಚಯವಿತ್ತು ಅದೇ *ಕಾರವಾನ್ ಬಾ ಗುರು ಟ್ರೆಕ್ ಮಾಡೋಣ*
ಈ ಸಂಘ/ತಂಡ ದಿನಾಂಕ 14 ಮತ್ತು 15 ಅಕ್ಟೋಬರ್ 2023 ರಂದು ಕುದುರೆಮುಖ ಟ್ರೆಕ್ ಹೋಗೋ ಯೋಚನೆಯಲ್ಲಿದರು. ಇವರ ಜೊತೆ ಹೋಗೋಕೆ ನಾವು ನಿರ್ಧಾರ ಮಾಡಿದೆವು. ನಮ್ಮ ತಂಡದಿoದ 7 ಜನ, ಮೈಸೂರಿನಿಂದ 6 ಜನ (ಸ್ನೇಹಿತರ ಗುಂಪು), ಟ್ರೆಕ್ ತಂಡದಿಂದ 4 ಜನ ಮತ್ತೋರ್ವ ಏಕಾಂಗಿ ಪಯಣಿಗ ಸೇರಿ ಒಟ್ಟು 18 ಜನ ದಿನಾಂಕ 13 ಅಕ್ಟೋಬರ್ 2023 ರ ರಾತ್ರಿ ಬೆಂಗಳೂರಿನಿಂದ ಹೊರಟೆವು.
ನಾನು ಈ ಮೊದಲು ಯಾವುದೆ ಟ್ರೆಕ್ ತಂಡದ ಜೊತೆ ಟ್ರೆಕ್ ಮಾಡಿರ್ಲಿಲ್ಲ. ಹಾಗಾಗಿ ಇದು ನನ್ನ ಮೊದಲನೇ ಅನುಭವ. ಬೇರಯವರಿಗೆ ಹೇಗೆ ಕುತೂಹಲ, ಮುಜುಗರ ಇರುತ್ತೋ ನನಗೂ ಹಾಗೆ ಇತ್ತು. ಅದನ್ನ ಟ್ರೆಕ್ ತಂಡದ ಸದಸ್ಯರು ಒಂದು ಆಟದಿಂದ ದೂರ ಮಾಡಿಸಿದರು, ಅದೇ ಡಂಬ್-ಚರಾಡೆಸ್. ಆ ಆಟದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿದರು, ಆಟ ಬಹಳ ಮಜವಾಗಿತ್ತು. ಈ ಸಂದರ್ಭದಲ್ಲಿ ಪರಸ್ಪರ ಪರಿಚಯ ಮಾಡಿಕೊಂಡೆವು. ಹೀಗೆ ಸಮಯ ಕಳಿತಾ ಕಳಿತಾ ಮಲಗೋ ಸಮಯವಾಯ್ತು. ಮಲಗೋಕು ಮುನ್ನ ಟ್ರೆಕ್ ತಂಡದ ಮುಖ್ಯಸ್ಥ ಊಟಕ್ಕೆ ಬಸ್ ನಿಲ್ಸೋಕೆ ಚಾಲಕನಿಗೆ ಹೇಳಿದರು, ಅದರಂತೆ ಊಟಕ್ಕೆ ನಿಲ್ಲಿಸಿದರು. ಸದಸ್ಯರು ತಮ್ಮ ತಮ್ಮ ಗುಂಪಿನೊಂದಿಗೆ ಹೋಗಿ ಊಟ ಮಾಡಿ ಬಂದು ಅವ್ರ ಜಾಗದಲ್ಲಿ ಮಲಗಿದರು, ಪ್ರಯಾಣ ಮುಂದವರೆಸಿದೆವು.
ಮಲೆನಾಡಿನ ರಸ್ತೆಗಳು ಯಾವುದಕ್ಕೆ ಹೆಸರುವಾಸಿ, ನಿಮಗೆ ಗೊತ್ತಾ? ರೌದ್ರವಾದ ಹೇರ್ಪಿನ್ ತಿರುವುಗಳು, ಘಟ್ಟಗಳು, ಹಚ್ಚ ಹಸಿರು ತುಂಬಿದ ರಮಣೀಯ ತಾಣಗಳು . ಕಂಡಿತಾ ಇದೆಲ್ಲವನ್ನೂ ನಾನು ಅನುಭವಿಸಿದೆ. ಯಾಕೆ ಈ ವಿಚಾರ ಹೇಳಿದೆ ಅಂದ್ರೆ ಪ್ರಯಾಣದ ಸಮಯದಲ್ಲಿ ದಾರಿ ಉದ್ಧಕ್ಕು ತಿರುವುಗಳು ಇದ್ದಿದರಿಂದ ನಾನು ಮಲಗೋಕೆ ಆಗಲಿಲ್ಲ, ನನಗೆ ಇದರ ಅನುಭವ ಇಲ್ಲದ ಕಾರಣ ನಿದ್ರೆ ಬರಲಿಲ್ಲ. ಸಮಯ ಸುಮಾರು ಬೆಳಗಿನ ಜಾವ 3 ರಿಂದ 4 ಗಂಟೆ ಆಗಿತ್ತು ಬಸ್ ಚಾಲಕ ಟೀ ಕುಡಿಯೋಕೆ ನಿಲ್ಲಿಸಿದರು. ನಿದ್ದೆ ಇಲ್ಲದ ನಾನು ಅವರ ಜೊತೆ ಟೀ ಕುಡಿದು ಟೈಮ್ ಪಾಸ್ ಮಾಡಿದೆ. ಮುಂದಿನ 3 ಗಂಟೆ ಪ್ರಯಾಣದಲ್ಲಿ ನಾವು ನಮ್ಮ ರೆಸಾರ್ಟ್ಗೆ ತಲುಪಿದೆವು. ಅದು ನಸು ಮುಂಜಾನೆ ಸಮಯ ಆ ಸಮಯಕಾಗಲ್ಲೆ ಬೇರೆ ಬೇರೆ ಟ್ರೆಕ್ ತಂಡದ ಜನರು ಟ್ರೆಕ್ಕಿಂಗ್ ಗೆ ಹೊರತು ಸಜ್ಜಾಗಿದ್ದರು, ಅದನ್ನು ನೋಡಿದ ನಮ್ಮ ತಂಡದ ಮುಖ್ಯಸ್ಥ ಮೋಹನ್ ಅವರು ಎಲ್ಲಾ ಸದಸ್ಯರಿಗೂ ಬೇಗ ರೆಡಿ ಆಗಲಿಕ್ಕೆ ಹೇಳಿ ನಂತರ ಅವರು ಟ್ರೆಕ್ಕಿಂಗ್ ಪಾಸ್ ತಗೊಳಲಿಕ್ಕೆ ಹೋದರು. ನಾವು ಎಲ್ಲರೂ ಸುಮಾರು 9AM ಗಂಟೆಗೆ ರೆಡಿ ಆಗಿ ತಿಂಡಿ ಮಾಡಿ ಟ್ರೆಕ್ಕಿಂಗ್ ಹೋಗೋಕೆ ಸಿದ್ದರಾಗಿದ್ದೆವು. ಇದು ಪಶ್ಚಿಮ ಘಟ್ಟಗಳ ಒಡಲಲ್ಲಿ ಸುಂದರ ಸಮಯ ಕಳೆಯಲು ಮೊದಲ ಹೆಜ್ಜೆ ಅದಕ್ಕೆ ನಾವು ಸಜ್ಜಾದೆವು.
ಸಮಯ 9am ರಿಂದ 9.30am ನಮ್ಮ ಟ್ರೆಕ್ಕಿಂಗ ತಂಗಿದ್ದ ರೆಸಾರ್ಟ್ ನಿಂದ ಟ್ರೆಕ್ಕಿಂಗ್ ಸ್ಟಾರ್ಟ್ ಪಾಯಿಂಟ್ಗೆ 2KM to 2.5KM ಹೋಗಬೇಕಿತ್ತು, ಅದಕ್ಕೆ ಓಪನ್ ಬೊಲೆರೋ ಜೀಪಿನಲ್ಲಿ ಹೋದೆವು. ಸ್ಟಾರ್ಟಿಂಗ್ ಪಾಯಿಂಟ್ಗೆ ಹೋಗುವ ದಾರಿ ಹೇಗಿತ್ತು ಅಂದ್ರೆ ನಾವು ಜೀಪಿನಲ್ಲಿ ನಿಂತ ಜಾಗದಲ್ಲೇ ವ್ಯಾಯಾಮವಾಯಿತು, ಹೋಗೋಕೆ 15mins ರಿಂದ 30mins ಬೇಕಿತ್ತು 10am ಗೆ ಸ್ಟಾರ್ಟಿಂಗ್ ಪಾಯಿಂಟ್ ತಲುಪಿ ಮತ್ತೆ ಪೊಲೀಸ್ ಅಧಿಕಾರಿಗಳಿಂದ ಬ್ಯಾಗ ಚೆಕಿಂಗ್ ಕೂಡ ಆಯ್ತು. ಒಂದು ಫೋಟೋ ತೆಗೆಸಿಕೊಂಡು ಬೆಟ್ಟ ಹೇರಲು ಶುರುಮಾಡಿದೆವು. ಈಗ ಸ್ಟಾರ್ಟಿಂಗ್ ಪಾಯಿಂಟ್ನಿಂದಾ ಪೀಕ್ ಪಾಯಿಂಟ್ / ಕೊನೆಯ ಪಾಯಿಂಟ್ಗೆ 9KM ದಾರಿ ಅಂದರೆ ಒಟ್ಟು 18KM ಹೋಗಿ ಬರಲು. ಇದು ಸುಲಭದ ಮಾತಾಗಿರಲಿಲ್ಲ.
ಮುಂದುವರಿದ ಭಾಗ-2
Comments
Post a Comment