ನಾ ಕಂಡ ಆ ಕುದುರೆಮುಖ
ಇದು ನಾ ಕಂಡ ಕುದುರೆಮುಖ ಅನುಭವ ಹಂಚಿಕೊಳ್ಳುವ ಸಮಯ. ಕುದುರೆಮುಖ ನೋಡೋ ಆಸೆ ನನಗೆ ಬಹಳ ವರ್ಷದಿಂದ ಇತ್ತು. ನಾ ಕೆಲಸ ಮಾಡೋ ತಂಡದ ಹಿರಿಯ ಸಹಪಾಠಿ ಕೇಳಿದ್ರು "ಕುದುರೆಮುಖ ಹೋಗೋಣ ಬರ್ತಿಯ?", ಅದಕ್ಕೆ ನನ್ನ ಉತ್ತರ "ಸರಿ ಬರ್ತಿನಿ". ಅವರಿಗೆ ಕುದುರೆಮುಖ ತೋರಿಸೋ ಒಂದು ಗುಂಪಿನ ಪರಿಚಯವಿತ್ತು ಅದೇ * ಕಾರವಾನ್ ಬಾ ಗುರು ಟ್ರೆಕ್ ಮಾಡೋಣ * ಈ ಸಂಘ/ತಂಡ ದಿನಾಂಕ 14 ಮತ್ತು 15 ಅಕ್ಟೋಬರ್ 2023 ರಂದು ಕುದುರೆಮುಖ ಟ್ರೆಕ್ ಹೋಗೋ ಯೋಚನೆಯಲ್ಲಿದರು. ಇವರ ಜೊತೆ ಹೋಗೋಕೆ ನಾವು ನಿರ್ಧಾರ ಮಾಡಿದೆವು. ನಮ್ಮ ತಂಡದಿoದ 7 ಜನ, ಮೈಸೂರಿನಿಂದ 6 ಜನ (ಸ್ನೇಹಿತರ ಗುಂಪು), ಟ್ರೆಕ್ ತಂಡದಿಂದ 4 ಜನ ಮತ್ತೋರ್ವ ಏಕಾಂಗಿ ಪಯಣಿಗ ಸೇರಿ ಒಟ್ಟು 18 ಜನ ದಿನಾಂಕ 13 ಅಕ್ಟೋಬರ್ 2023 ರ ರಾತ್ರಿ ಬೆಂಗಳೂರಿನಿಂದ ಹೊರಟೆವು. ನಾನು ಈ ಮೊದಲು ಯಾವುದೆ ಟ್ರೆಕ್ ತಂಡದ ಜೊತೆ ಟ್ರೆಕ್ ಮಾಡಿರ್ಲಿಲ್ಲ. ಹಾಗಾಗಿ ಇದು ನನ್ನ ಮೊದಲನೇ ಅನುಭವ. ಬೇರಯವರಿಗೆ ಹೇಗೆ ಕುತೂಹಲ, ಮುಜುಗರ ಇರುತ್ತೋ ನನಗೂ ಹಾಗೆ ಇತ್ತು. ಅದನ್ನ ಟ್ರೆಕ್ ತಂಡದ ಸದಸ್ಯರು ಒಂದು ಆಟದಿಂದ ದೂರ ಮಾಡಿಸಿದರು, ಅದೇ ಡಂಬ್-ಚರಾಡೆಸ್. ಆ ಆಟದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿದರು, ಆಟ ಬಹಳ ಮಜವಾಗಿತ್ತು. ಈ ಸಂದರ್ಭದಲ್ಲಿ ಪರಸ್ಪರ ಪರಿಚಯ ಮಾಡಿಕೊಂಡೆವು. ಹೀಗೆ ಸಮಯ ಕಳಿತಾ ಕಳಿತಾ ಮಲಗೋ ಸಮಯವಾಯ್ತು. ಮಲಗೋಕು ಮುನ್ನ ಟ್ರೆಕ್ ತಂಡದ ಮುಖ್ಯಸ್ಥ ಊಟಕ್ಕೆ ಬಸ್ ನಿಲ್ಸೋಕೆ ಚಾಲಕನಿಗೆ ಹೇಳಿದರ...